खेल

Blog single photo

70ರ ಇಳಿ ವಯಸ್ಸಿನಲ್ಲೂ ಸೈಕಲು ತುಳಿದು ಸಾಧನೆ ಮಾಡಿದ ಅಜ್ಜಿ

08/10/2019


ಲಾಪಜ, ಅ.08 (ಹಿ.ಸ) - ಈ ಅಜ್ಜಿಯ ಉತ್ಸಾಹ ಯುವ ಸಮುದಾಯವನ್ನು ನಾಚಿಸುವಂತಿದೆ. ಬೊಲಿವಿಯಾದ ಅಜ್ಜಿ ತನ್ನ 70ನೇ ವಯಸ್ಸಿನಲ್ಲೂ ಅಸಾಮಾನ್ಯ ಸಾಧನೆ ಮಾಡಿದ್ದಾರೆ. 
ಸಾವಿನ ಹೆದ್ದಾರಿ ಎಂದೇ ಕರೆಯಲಾಗುವ ಬೊಲಿವಿಯದ ಸ್ಪೈರಲ್‌ ಸ್ಕೈವಾರ್ಡ್‌ ರಸ್ತೆಯಲ್ಲಿ ಸೈಕ್ಲಿಂಗ್‌ ನಡೆಸಿ ಅದರ ಮೇಲುದಿಯನ್ನು ತಲುಪಿದ್ದಾರೆ. ಸದಾ ಹಿಮಪಾತ, ಮಳೆ, ಕಲ್ಲು ಕುಸಿತ, ಕಣಿವೆಯ ಆಸುಪಾಸಲ್ಲೇ ಸಾಗುವ ಈ ರಸ್ತೆಯಲ್ಲಿ 70ರ ಅಜ್ಜಿ ಮಿರ್ಧಾ ಮನೋಜ್ ಅವರು ಯುವಕರನ್ನು ನಾಚಿಸುವಂತೆ ಸೈಕಲ್‌ ತುಳಿದಿದ್ದಾರೆ. 
ಬೊಲಿವಿಯಾದ ಆಂಡಿಸ್‌ ಪರ್ವತದಲ್ಲಿ 11 ಸಾವಿರ ಅಡಿ ಎತ್ತರದಲ್ಲಿ ಈ ರಸ್ತೆಯಿದೆ. ಪಕ್ಕಾ ಉಬ್ಬುರಸ್ತೆ. ಇಲ್ಲಿ ನಡೆಯುವುದೇ ಕಷ್ಟ, ಸೈಕಲ್‌ ತುಳಿಯುವುದಂತೂ ದುಸ್ಸಾಹಸ. ಕಚ್ಚಾ ರಸ್ತೆ. ಅಂತಹ ಜಾಗದಲ್ಲಿ 60 ಕಿ.ಮೀ. ಬಿಡುವಿಲ್ಲದೇ ಅಜ್ಜಿ ಸೈಕಲ್‌ ತುಳಿದು, ಪರ್ವತದ ಶೃಂಗಕ್ಕೆ ತಲುಪಿದ್ದಾರೆ. ತನ್ನ ಜೀವನದಲ್ಲಿ ಈ ಸಾಧನೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಅಜ್ಜಿ ಮಿರ್ಥಾ ಹೇಳುತ್ತಾರೆ. ಈ ಅಜ್ಜಿ, ಇಂತಹ ಭಯಾನಕ ಕೂಟದಲ್ಲಿ ಭಾಗವಹಿಸಿದ ಅತಿ ಹಿರಿಯ ವ್ಯಕ್ತಿಯಾಗಿದ್ದಾರೆ. 
ಮಗನ ಸಾವಿನ ನೋವು ಮರೆಯಲು ಸೈಕಲ್‌ ಹತ್ತಿದ್ದಾರೆ. ಭಯಾನಕ ಸಾಹಸವನ್ನು ಮಾಡುವ ಉತ್ಸಾಹ ಈ ಅಜ್ಜಿಗೆ ಹೇಗೆ ಬಂತು ಅಂದರೆ,  ಕೆಲವು ವರ್ಷಗಳ ಹಿಂದೆ ಮಿರ್ಥಾ ಸೈಕಲ್‌ ತುಳಿಯಲು ಆರಂಭಿಸಿದರು. ಅದಕ್ಕೆ ಕಾರಣ ತನ್ನ ಪುತ್ರನ ಸಾವು. ಅಚಾನಕ್ಕಾಗಿ ಮಗ ಸತ್ತು ಹೋಗಿದ್ದರಿಂದ ಮಿರ್ಥಾ ಅವರು ತೀವ್ರ ಹತಾಶೆಗೊಂಡಿದ್ದರು.
ಆಗ ಮನಃಶಾಸ್ತ್ರಜ್ಞ, ಗೆಳೆಯನೊಬ್ಬ ಸೈಕಲ್‌ ತುಳಿಯಲು ಸಲಹೆ ನೀಡಿದರು. ಹಾಗೆ ಶುರುವಾದ ಈ ಪಯಣ, ಇದೀಗ ಅಜ್ಜಿಗೆ ಮರುಜನ್ಮ ನೀಡಿದೆ. 6 ಮೊಮ್ಮಕ್ಕಳು ಕೂಡ ಅಜ್ಜಿಯೊಂದಿಗೆ ಸೈಕಲ್‌ ತುಳಿಯುತ್ತಾರೆ. 18 ವರ್ಷದ ಹಿರಿಯ ಮೊಮ್ಮಗ ಸದ್ಯದಲ್ಲೇ ತನ್ನ ದಾರಿಯನ್ನೇ ಆಯ್ದುಕೊಳ್ಳುವ ವಿಶ್ವಾಸ ಅಜ್ಜಿಗಿದೆ.


 
Top