क्षेत्रीय

Blog single photo

ಸಿದ್ಧರಾಮಯ್ಯ ಒಬ್ಬ ಹುಚ್ಚ, ಸಿಎಂ ಆಗುವ ಹುಚ್ಚಿನಿಂದ ಹೊರಬಂದಿಲ್ಲ - ಕೆ.ಎಸ್. ಈಶ್ವರಪ್ಪ

29/11/2019


ಹುಬ್ಬಳ್ಳಿ,ನ.29 (ಹಿ.ಸ) - ಉಪಚುನಾವಣೆ ಬಳಿಕ ತಾನೇ ಮುಖ್ಯಮಂತ್ರಿ ಎಂದೇಳುತ್ತಿರುವ ಸಿದ್ದರಾಮಯ್ಯ ಹೇಳಿಕೆಯನ್ನು ಭ್ರಮೆ ಎನ್ನಬೇಕೋ, ಕನಸು ಅನ್ನಬೇಕೋ ತಿಳಿಯುತ್ತಿಲ್ಲ. ಎಂಟು ಸ್ಥಾನ ಗೆಲ್ಲದಿದ್ದರೆ ತಾವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವೆ. ನೀವೂ ಎಂಟು ಸ್ಥಾನ ಗೆಲ್ಲದಿದ್ದರೆ ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ? ಎಂದು ಸಿದ್ದರಾಮಯ್ಯ ಅವರಿಗೆ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಬಹಿರಂಗ ಸವಾಲು ಹಾಕಿದ್ದಾರೆ. 
ಸಿದ್ದರಾಮಯ್ಯ ಆತನೊಬ್ಬ ಹುಚ್ಚ, ಹುಚ್ಚಿನಿಂದ ಹೊರ ಬಂದಿಲ್ಲ. ಮುಖ್ಯಮಂತ್ರಿ ಸ್ಥಾನದ ಹುಚ್ಚಿನಿಂದ, ಭ್ರಮೆಯಿಂದ ಹೊರ ಬರಲು ಆಗುತ್ತಿಲ್ಲ ಎಂದು ಈಶ್ವರಪ್ಪ ಕಿಡಿಕಾರಿದರು. ಸಿದ್ದರಾಮಯ್ಯ ಜೊತೆ ಯಾವುದೇ ಕಾಂಗ್ರೆಸ್ ನಾಯಕರಿಲ್ಲ. ಅತನೊಬ್ಬ ಸ್ವಾರ್ಥಿ, ರಾಜ್ಯದಲ್ಲಿ ಯಾರನ್ನು ಬೆಳೆಯಲು ಬಿಡುತ್ತಿಲ್ಲ. ಯಾವ ಕುರುಬ, ಹಿಂದುಳಿದ ನಾಯಕರನ್ನು ಬೆಳೆಸಿದ್ದಾರೆ ಹೇಳಿ. ಎಚ್. ವಿಶ್ವನಾಥ್ ನನ್ನು ಮುಗಿಸಲು ಹೆಜ್ಜೆ ಹೆಜ್ಜೆಗೂ ಪ್ರಯತ್ನ ಮಾಡಿದರು. ಲೋಕಸಭಾ ಚುನಾವಣೆಯಲ್ಲಿ ಎರಡು ಪಕ್ಷಗಳ ಸ್ಥಿತಿ ಏನಾಗಿದೆ ಗೊತ್ತಿಲ್ವೇ? ರಾಜ್ಯದ ಜನರು ಜೆಡಿಎಸ್-ಕಾಂಗ್ರೆಸ್ ತಿರಸ್ಕರಿಸಿದ್ದಾರೆ. ಕುಮಾರಸ್ವಾಮಿಗೆ ಮುಖ್ಯಮಂತ್ರಿ ಆಗಿದ್ದಾಗ ಮಗನನ್ನೇ ಗೆಲ್ಲಿಸಲು ಆಗಲಿಲ್ಲ. ಇನ್ನು ಬಿಜೆಪಿಯನ್ನು ಸೋಲಿಸುತ್ತಾರಾ? ಎಂದು ಲೇವಡಿ ಮಾಡಿದರು. ಮುಂದಿನ ಮೂರುವರೆ ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಕೆ.ಎಚ್. ಮುನಿಯಪ್ಪ ಸೋಲಿನಲ್ಲಿ ರಮೇಶ ಕುಮಾರ ಪಾತ್ರವಿಲ್ಲವೆಂದು ಎದೆ ಮುಟ್ಟಿಕೊಂಡು ಹೇಳಲಿ ಎಂದು ಈಶ್ವರಪ್ಪ ಸವಾಲು ಹಾಕಿದರು.


 
Top