खेल

Blog single photo

ಅಜರ್ ಪುತ್ರನ ಕೈ ಹಿಡಿಯಲಿರುವ ಸಾನಿಯಾ ಸಹೋದರಿ ಅನಮ್ ಮಿರ್ಜಾ

09/10/2019


ಹೈದರಾಬಾದ್‌, ಅ.09 (ಹಿ.ಸ) -  ಖ್ಯಾತ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಸಹೋದರಿ ಅನಮ್‌ ಮಿರ್ಜಾ ಹಾಗು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹಮ್ಮದ್‌ ಅಜರುದ್ದೀನ್‌ ಪುತ್ರ ಅಸಾದುದ್ದೀನ್‌ ನಡುವೆ ಗುಸುಗುಸು ಕೇಳಿಬಂದಿತ್ತು. ಇದೀಗ ಇವರಿಬ್ಬರು ಮದುವೆಯಾಗಲಿದ್ದಾರೆ. ಈ ಕುರಿತ ವಿಚಾರವನ್ನು ಸ್ವತಃ ಸಾನಿಯಾ ಮಿರ್ಜಾ ಅವರೇ ಖಚಿತಪಡಿಸಿದ್ದಾರೆ. ಈ ಇಬ್ಬರೂ ಇದೇ ಡಿಸೆಂಬರ್‌ನಲ್ಲಿ ವಿವಾಹವಾಗಲಿದ್ದಾರೆ. ಮೊಹಮ್ಮದ್‌ ಅಜರುದ್ದೀನ್‌ ಭಾರತೀಯ ಕ್ರಿಕೆಟ್‌ನಲ್ಲಿ ಉತ್ತುಂಗದಲ್ಲಿದ್ದಾಗ, ಸಾನಿಯಾ ಮಿರ್ಜಾ ಹೆಸರು ಯಾರಿಗೂ ಗೊತ್ತಿರಲಿಲ್ಲ. ಇದೀಗ ಸಾನಿಯಾ ಮಿರ್ಜಾ ಕೂಡ ಉತ್ತುಂಗದಲ್ಲಿದ್ದಾರೆ. ಮ್ಯಾಚ್ ಫಿಕ್ಸಿಂಗ್‌ ಆರೋಪದ ಹಿನ್ನಲೆಯಲ್ಲಿ ಮಹಮ್ಮದ್‌ ಅಜರುದ್ದೀನ್‌ ಕಳೆಗುಂದಿದ್ದರು. ಇದೀಗ ಅವರ ಪುತ್ರ ಸಾನಿಯಾ ಸಹೋದರಿಯ ಕೈಹಿಡಿಯುತ್ತಿದ್ದಾರೆ.


 
Top