ट्रेंडिंग

Blog single photo

ಕುಲಭೂಷಣ್ ಜಾಧವ್ ಅವರನ್ನು ಕೂಡಲೇ ಬಿಡುಗಡೆಗೆ ಒತ್ತಾಯಿಸಿದ ಭಾರತ

18/07/2019


ನವದೆಹಲಿ, ಜು.18 (ಹಿ.ಸ) -  ಭಾರತೀಯ ನಿವೃತ್ತ ನೌಕಾಧಿಕಾರಿ ಕುಲಭೂಷಣ್ ಜಾಧವ್‌ ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯವು ನೀಡಿದ್ದ ಮರಣದಂಡನೆ ಶಿಕ್ಷೆಯನ್ನು ಮರುಪರಿಶೀಲಿಸುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯ ಆದೇಶ ನೀಡಿದ ಬಳಿಕ  ಕುಲಭೂಷಣ್ ಜಾಧವ್ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಪಾಕಿಸ್ತಾನವನ್ನು ಭಾರತ ಒತ್ತಾಯಿಸಿದೆ.
ಜಾಧವ್ ಅವರನ್ನು ಭಾರತಕ್ಕೆ ಕರೆತರಲು ನಿರಂತರ ಪ್ರಯತ್ನ ಮುಂದುವರಿಸಲಾಗುವುದು ಎಂದು ಹೇಳಲಾಗಿದೆ. 
ಈ ಬಗ್ಗೆ ಸದನದಲ್ಲಿ ಇಂದು ಹೇಳಿಕೆ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಜಾಧವ್ ಅವರನ್ನು ಕಂಡು ಭೇಟಿ ಮಾಡಿ ಅವರೊಂದಿಗೆ ಮಾತನಾಡುವ ಭಾರತದ ಹಕ್ಕನ್ನು ಪಾಕಿಸ್ತಾನ ವಂಚಿಸಿದ್ದಲ್ಲದೆ, ಕಾನೂನು ಹೋರಾಟಕ್ಕೆ ಕೂಡ ಅಡ್ಡಿಪಡಿಸಿದಂತೆ ಕಾಣುತ್ತದೆ. ಅವರು ನಿರಪರಾಧಿಯಾಗಿದ್ದು, ಅವರ ವಿರುದ್ಧ ಪಾಕಿಸ್ತಾನ ಮಾಡುತ್ತಿರುವ ಆರೋಪ ನಿರಾಧಾರವಾಗಿದೆ.  ಕಾನೂನು ಪ್ರಾತಿನಿಧಿತ್ವವಿಲ್ಲದೆ ಅವರನ್ನು ಒತ್ತಾಯಪೂರ್ವಕವಾಗಿ ತಪ್ಪೊಪ್ಪಿಕೊಳ್ಳುವಂತೆ ಮಾಡಲಾಗಿದೆ ಎಂದು ಜೈಶಂಕರ್ ಆರೋಪಿಸಿದರು. 
ಕುಲಭೂಷಣ ಜಾಧವ್ ಅವರನ್ನು ಕೂಡಲೇ ಬಿಡುಗಡೆ ಮಾಡಿ ಭಾರತಕ್ಕೆ ಕಳುಹಿಸಿ ಎಂದು ಒತ್ತಾಯಿಸುವುದಾಗಿ ಜೈಶಂಕರ್ ತಿಳಿಸಿದ್ದಾರೆ. 


 
Top