खेल

Blog single photo

ಆರ್ಚರಿ ಚಾಂಪಿಯನ್ ಶಿಪ್ - ದೀಪಿಕಾ ಚಿನ್ನ ಗೆದ್ದರೆ, ಅಂಕಿತಾಗೆ ರಜತ ಪದಕ

29/11/2019


ಬ್ಯಾಂಕಾಕ್, ನ.29 (ಹಿ.ಸ) - ದೀಪಿಕಾ ಕುಮಾರಿ ಮತ್ತು ಅಂಕಿತಾ ಭಕಾತ್  21 ನೇ ಏಷ್ಯನ್ ಚಾಂಪಿಯನ್‌ಶಿಪ್‌ ಅರ್ಚರಿಯಲ್ಲಿ ಫೈನಲ್ಸ್ ತಲುಪಿದ್ದು  ಬಿಲ್ಲುಗಾರಿಕೆ ಮಹಿಳಾ ಪುನರಾವರ್ತಿತ ಸ್ಪರ್ಧೆಯಲ್ಲಿ ಭಾರತ ಒಲಿಂಪಿಕ್ ಕೋಟಾವನ್ನು ತನ್ನದಾಗಿಸಿಕೊಂಡಿದ್ದಾರೆ. ಫೈನಲ್ಸ್ ನಲ್ಲಿ ಸಿ ದೀಪಿಕಾ ಚಿನ್ನದ ಪದಕ ಗೆದ್ದರೆ ಅಂಕಿತಾ ರಜತ ಪದಕ ಗಳಿಸಿಕೊಂಡಿದ್ದಾರೆ. ದೀಪಿಕಾ ತನ್ನ ನಿಕಟಪೂರ್ವ ಪ್ರತಿಸ್ಪರ್ಧಿ ಅಂಕಿತಾರನ್ನು  6-0 ಅಂತರದಿಂದ ಪರಾಭವಗೊಳಿಸಿದರು.
ಏಷ್ಯನ್ ಬಿಲ್ಲುಗಾರಿಕೆ ಚಾಂಪಿಯನ್‌ಶಿಪ್: ದೀಪಿಕಾ ಕುಮಾರಿ ಹಾಗೂ ಅಂಕಿತಾ ಇಬ್ಬರೂ  ಆಡಳಿತಾತ್ಮಕ ಕಾರಣಕ್ಕಾಗಿ ರಾಷ್ಟ್ರೀಯ ಒಕ್ಕೂಟ ಅಮಾನತಿನಲ್ಲಿರುವ ಕಾರಣ ಧ್ವಜವಿಲ್ಲದೆ ಸ್ಪರ್ಧಿಸಿದ್ದರು. ಅಗ್ರ ಶ್ರೇಯಾಂಕಿತೆ ದೀಪಿಕಾ ಹಾಗೂ  ಆರನೇ ಶ್ರೇಯಾಂಕದ ಅಂಕಿತಾ ಬಿಲ್ಲುಗಾರಿಕೆ ಫೈನಲ್ಸ್ ಹಂತ ಪ್ರವೇಶಿಸಿದ್ದರು.


 
Top