मनोरंजन

Blog single photo

ಹಿಂದೂ ದೇವರ ಬಗ್ಗೆ ದಬಾಂಗ್ -3 ನಲ್ಲಿ ಅವಹೇಳನ, ಸೆನ್ಸಾರ್ ಪ್ರಮಾಣಪತ್ರ ನೀಡದಂತೆ ಹಿಂದೂ ಜನಜಾಗೃತಿ ಸಮಿತಿ ಆಗ್ರಹ

28/11/2019


ಬೆಂಗಳೂರು, ನ.28 (ಹಿ.ಸ) -  ಡಿಸೆಂಬರ್ 20 ರಂದು ಪ್ರದರ್ಶನಗೊಳ್ಳಲು ಸಿದ್ಧವಾಗಿರುವ ಬಾಲಿವುಡ್ ಸಲ್ಮಾನ್ ಖಾನ್' ಅಭಿನಯದ 'ದಬಾಂಗ್-3' ಚಲನಚಿತ್ರದಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ದೃಶ್ಯಗಳು, ಹಾಡುಗಳಿದ್ದು, ಚಿತ್ರಕ್ಕೆ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡದಂತೆ ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.
ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಇದರಲ್ಲಿ ‘ಹುಡ್-ಹುಡ್ ದಬಾಂಗ್-ದಬಾಂಗ್’ ಹಾಡಿನಲ್ಲಿ ಹಿಂದೂಗಳ ಸಾಧು, ಅದೇ ರೀತಿ ಭಗವಾನ್ ಶಿವ, ಶ್ರೀರಾಮ ಹಾಗೂ ಶ್ರೀಕೃಷ್ಣ ದೇವರುಗಳಿಗೆ ಅವಮಾನಿಸಲಾಗಿದೆ. ಸಲ್ಮಾನ ಖಾನ್ ನೊಂದಿಗೆ ಸಾಧುಗಳು ಪಾಶ್ಚಾತ್ಯರಂತೆ ಅಶ್ಲೀಲ ಹಾವಭಾವದಲ್ಲಿ ಕುಣಿಯುತ್ತಿರುವಂತೆ ತೋರಿಸಲಾಗಿದೆ. ಇದರಿಂದ ಸಮಸ್ತ ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ನೋವಾಗಿದೆ. ಸಲ್ಮಾನ ಖಾನ್ ಹಿಂದೂ ಸಾಧುಗಳನ್ನು ಅವಮಾನಿಸಿದ್ದಾರೆ ಎಂದು ಸಮಿತಿ ಮುಖಂಡ ಮೋಹನ್‌ಗೌಡ ಆರೋಪಿಸಿದ್ದಾರೆ. ಖಾನ್ ಚಿತ್ರದಲ್ಲಿ ಬರೀ ಹಿಂದೂ ದೇವರುಗಳಿಗೆ ಅವಮಾನ ಮಾಡಿದ್ದು, ಮುಲ್ಲಾ-ಮೌಲ್ವಿ ಅಥವಾ ಫಾದರ್-ಬಿಷಪ್ ಅವರನ್ನು ಕುಣಿಯುತ್ತಿರುವಂತೆ ತೋರಿಸುವ ಧೈರ್ಯವಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.  ಹಿಂದೂ ಜನಜಾಗೃತಿ ಸಮಿತಿವತಿಯಿಂದ ಮುಂಬೈನ ಕೇಂದ್ರೀಯ ಚಲನಚಿತ್ರ ಪರಿವೀಕ್ಷಣ ಮಂಡಳಿಗೆ ‘ದಬಾಂಗ್ 3 ಈ ಚಲನಚಿತ್ರದಿಂದ ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುವಂತಹ ಪ್ರಸಂಗವನ್ನು ತೆಗೆಯಬೇಕು ಹಾಗು ಈ ಚಲನಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡಬಾರದು ಎಂದು ಮನವಿ ಮಾಡಲಾಗಿದೆ. 


 
Top