व्यापार

Blog single photo

ಜಿಡಿಪಿ ವರದಿಗೂ ಮುನ್ನವೇ ಡಾಲರ್ ಎದುರು ಕುಸಿದ ರೂಪಾಯಿ

29/11/2019


ಮುಂಬೈ,ನ.29 (ಹಿ.ಸ) - ಎರಡನೆ ತ್ರೈಮಾಸಿಕ ಜಿಡಿಪಿ ವರದಿ ಪ್ರಕಟವಾಗುವ ಮುನ್ನವೇ ಭಾರತೀಯ ರೂಪಾಯಿ ಮೌಲ್ಯದಲ್ಲಿ 11 ಪೈಸೆಯಷ್ಟು ಕುಸಿತ ಕಂಡಿದೆ. ಇಂದಿನ ವಹಿವಾಟಿನಲ್ಲಿ ರೂಪಾಯಿ ಮೌಲ್ಯ ಅಮೆರಿಕನ್ ಡಾಲರ್ ಎದುರು 11 ಪೈಸೆ ಕುಸಿತ ಕಂಡು, 71.73 ರೂಪಾಯಿ ತಲುಪಿತ್ತು. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ ಬೆಳಗ್ಗೆ ಅಮೆರಿಕನ್ ಡಾಲರ್​ ಎದುರು ರೂಪಾಯಿ ಮೌಲ್ಯ 71.63 ರೊಂದಿಗೆ ವಹಿವಾಟು ಆರಂಭವಾಗಿತ್ತು. ಕಳೆದ ಸಂಜೆ ವಹಿವಾಟು ಅಂತ್ಯವಾದಾಗ ರೂಪಾಯಿ ಮೌಲ್ಯ 71.62 ರೂಪಾಯಿ ಆಗಿತ್ತು. ಆದರೆ, ಇಂದು  ವಹಿವಾಟು ಆರಂಭವಾಗುತ್ತಿದ್ದಂತೆಯೇ ರೂಪಾಯಿ ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ. ಆರ್ಥಿಕ ತಜ್ಞರು ಅಭಿಪ್ರಾಯದಂತೆ ಹೂಡಿಕೆದಾರರು ಅಮೆರಿಕ-ಚೀನಾ ವಾಣಿಜ್ಯ ವಹಿವಾಟಿನಲ್ಲಿ ಸ್ಪಷ್ಟತೆಯನ್ನು ಹುಡುಕುತ್ತಿದ್ದು, ಮಂದಗತಿಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿ ಭಾರತದ ರೂಪಾಯಿ ವಹಿವಾಟು ಕೂಡ ಮಂದಗತಿಯಲ್ಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕಚ್ಚಾ ತೈಲ ಮಾರುಕಟ್ಟೆಯಲ್ಲೂ ಬ್ಯಾರೆಲ್ ದರ ಶೇಕಡ 0.41 ಕುಸಿತ ಕಂಡು 63.61 ಡಾಲರ್ ತಲುಪಿದೆ. 


 
Top