राष्ट्रीय

Blog single photo

ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.5 ರಷ್ಟು ಹೆಚ್ಚಳ - ಪ್ರಕಾಶ್ ಜಾವ್ಜೇಕರ್

09/10/2019


ನವದೆಹಲಿ, ಅ.09 (ಹಿ.ಸ) -  ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.5ರಷ್ಟು ಏರಿಕೆ ಮಾಡಿದ್ದು, ಸುಮಾರು 50 ಲಕ್ಷ ಸರಕಾರಿ ನೌಕರರಿಗೆ ಲಾಭವಾಗಲಿದೆ. ಇದು ಕೇಂದ್ರ ಸರಕಾರಿ ನೌಕರರಿಗೆ ದೀಪಾವಳಿ ಕೊಡುಗೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಇಂದು ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.  ಕೇಂದ್ರ ಸರಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.12ರಿಂದ ಶೇ.17ಕ್ಕೆ ಹೆಚ್ಚಿಸಲಾಗಿದೆ.  ತುಟ್ಟಿಭತ್ಯೆ ಶೇ.5ರಷ್ಟು ಏರಿಕೆಯಿಂದ ಕೇಂದ್ರ ಸರಕಾರದ ಬೊಕ್ಕಸಕ್ಕೆ 16 ಸಾವಿರ ಕೋಟಿ ರೂಪಾಯಿ ಹೊರೆ ಆಗಲಿದೆ. ಈ ಘೋಷಣೆಯಿಂದ ಕೇಂದ್ರ ಸರಕಾರದ ಹಲವಾರು ವಲಯಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ನೆರವಾಗಲಿದೆ ಎಂದು ಜಾವ್ಡೇಕರ್ ತಿಳಿಸಿದರು. ಶೇ.5ರಷ್ಟು ತುಟ್ಟಿಭತ್ಯೆ ಏರಿಕೆಯಿಂದ ಸುಮಾರು 65 ಲಕ್ಷ ಪಿಂಚಣಿದಾರರಿಗೂ ಲಾಭ ಆಗಲಿದೆ ಎಂದು ಜಾವ್ಡೇಕರ್ ತಿಳಿಸಿದ್ದಾರೆ. ಕೇಂದ್ರ ಸರಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.5ರಷ್ಟು ಹೆಚ್ಚಿಸುವಂತೆ 7ನೇ ವೇತನ ಆಯೋಗ ಶಿಫಾರಸು ಮಾಡಿತ್ತು.


 
Top