मनोरंजन

Blog single photo

ಟಿಕ್ ಟಾಕ್ ಲೋಕಕ್ಕೆ ನಟಿ ರಶ್ಮಿಕಾ ಮಂದಣ್ಣ ಪ್ರವೇಶ

12/07/2019


ಬೆಂಗಳೂರು, ಜು.12 (ಹಿ.ಸ) - ಟಿಕ್ ಟಾಕ್ ಲೋಕಕ್ಕೆ ಸ್ಯಾಂಡಲ್ ವುಡ್ ನಟಿ ರಶ್ಮಿಕಾ ಮಂದಣ್ಣ ಪಾದಾರ್ಪಣೆ ಮಾಡಿದ್ದಾರೆ. ಟಿಕ್ ಟಾಕ್ ಗೆ ಮನ ಸೋತ ರಶ್ಮಿಕಾ ಮಂದಣ್ಣ ಹೊಸ ಖಾತೆ ತೆರೆದಿದ್ದಾರೆ. Iamrashmika ಅವರ ಟಿಕ್ ಟಾಕ್ ಹ್ಯಾಂಡಲ್ ಆಗಿದೆ.
ಟಿಕ್ ಟಾಕ್ ಖಾತೆ ಮೂಲಕ ತಮ್ಮ ಮುಂದಿನ ಸಿನಿಮಾ ‘ಡಿಯರ್ ಕಾಮ್ರೆಡ್’ ಬಗ್ಗೆ ವಿಷಯಗಳನ್ನು ರಶ್ಮಿಕಾ ಹಂಚಿಕೊಳ್ಳಲಿದ್ದಾರೆ.
ಇಷ್ಟು ದಿನ ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಮೂಲಕ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿ ಇದ್ದ ಅವರು, ಈಗ ಟಿಕ್ ಟಾಕ್ ಗೆ ಪ್ರವೇಶ ಮಾಡಿದ್ದಾರೆ.


 
Top