अंतरराष्ट्रीय

Blog single photo

ಅಪ್ಘಾನಿಸ್ತಾನ - ಅತ್ಮಹತ್ಮಾ ಬಾಂಬ್ ದಾಳಿಗೆ 10 ಮಂದಿ ಬಲಿ

08/10/2019


ಕಾಬೂಲ್, ಅ.08 (ಹಿ.ಸ) -  ಆಫ್ಘಾನಿಸ್ತಾನದಲ್ಲಿ ಮತ್ತೊಂದು ಭೀಕರ ಆತ್ಮಹತ್ಯಾ ದಾಳಿ ನಡೆದಿದ್ದು, ಘಟನೆಯಲ್ಲಿ ಮಕ್ಕಳೂ ಸೇರಿದಂತೆ ಕನಿಷ್ಛ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಅಫ್ಘನ್ ಸೇನಾ ಶಿಬಿರವನ್ನು ಗುರಿಯಾಗಿಸಿಕೊಂಡು ಉಗ್ರರು ಈ ದಾಳಿ ನಡೆಸಿರುವ ಶಂಕೆ ಇದ್ದು, ಅಫ್ಘಾನಿಸ್ತಾನದ ಭದ್ರತಾ ಪಡೆಗೆ ಜಲಾಲಾಬಾದ್‌ನಲ್ಲಿ ನೇಮಕಾತಿ ನಡೆಯುತ್ತಿದ್ದ ವೇಳೆಯಲ್ಲಿ ಮಿನಿಬಸ್ ಅನ್ನು ಗುರಿಯಾಗಿಸಿಕೊಂಡು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೇನಾ ಪಡೆಗೆ ನೇಮಕಾತಿಗೊಂಡವರು ಕಾಬೂಲ್‌ಗೆ ಮಿನಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ಜರುಗಿದೆ ಎಂದು ನಂಗರ್‌ಹಾರ್ ಪ್ರಾಂತೀಯ ಮಂಡಳಿಯ ಸದಸ್ಯ ಸೊಹ್ರಾಬ್ ಖಾದೇರಿ ತಿಳಿಸಿದ್ದಾರೆ. ಸರಕು ಸಾಗಿಸಲು ಬಳಕೆ ಮಾಡುವ ಪುಟ್ಟ ವಾಹನದಲ್ಲಿ ಬಾಂಬ್ ಇಡಲಾಗಿತ್ತು ಎಂದು ವರದಿಯಾಗಿದೆ.


 
Top