मनोरंजन

Blog single photo

ಹಿರಿಯ ನಟ ಶಂಖನಾದ ಅರವಿಂದ್ ಕೊರೋನಾ ಸೋಂಕಿನಿಂದ ನಿಧನ

07/05/2021

ಬೆಂಗಳೂರು,ಮೇ 7 : ಕನ್ನಡ ಚಿತ್ರರಂಗದ ಹಿರಿಯ ನಟ,ನಿರ್ಮಾಪಕ ಶಂಖನಾದ ಅರವಿಂದ್ ಕೊರೊನಾ ಸೋಂಕಿನಿಂದ‌‌ ನಿಧನರಾಗಿದ್ದಾರೆ.

ಕಳೆದ 13 ದಿನಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮದ್ಯಾಹ್ನ ನಿಧನರಾಗಿದ್ದಾರೆ.

ಇಬ್ಬರು ಹೆಣ್ಣು ಮಕ್ಕಳು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅರವಿಂದ ಅವರ ಪತ್ನಿ ಅನಾರೋಗ್ಯ ದಿಂದ ಮೂರು ತಿಂಗಳ ಹಿಂದೆ ಅಗಲಿದ್ದರು‌.

ಶಂಖನಾದ ಅವರಿಂದ ಅವರ ನಿಧನದ ವಿಷಯನ್ನು ಅವರ ಪುತ್ರಿ‌ ಮಾನಸ ಹೊಳ್ಳ ಸಾಮಾಜಿಕ ಜಾಲ ತಾಣದಲ್ಲಿ ಈ ವಿಷಯ ತಿಳಿಸಿ ಕಂಬನಿ ಮಿಡಿದಿದ್ದಾರೆ

250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಅಪಾರ ಜನಪ್ರಿಯತೆ ಗಳಿಸಿದ್ದ ಅದ್ಭುತ ಕಲಾವಿದ, ಶಂಕನಾದ ಬೆಟ್ಟದ ಹೂವು ಸೇರಿದಂತೆ ಅನೇಕ ಚಿತ್ರಗಳಲ್ಲಿ ಮರೆಯಲಾಗದ ಪಾತ್ರ ನಿರ್ವಹಿಸಿದ್ದಾರೆ

ಸಂತಾಪ : ಶಂಖನಾದ ಅರವಿಂದ ನಿಧನಕ್ಕೆ ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಸಂತಾಪ ಸೂಚಿಸಿದ್ದಾರೆ. ಕೊರೋನಾ ಕನ್ನಡ ಸಾಂಸ್ಕೃತಿಕ ಲೋಕದ ಅನೇಕ ಪ್ರತಿಭೆಗಳನ್ನು ಕಸಿದುಕೊಂಡಿದೆ, ಆ ಸಾಲಿಗೆ 
ಅರವಿಂದ ಸಹ ಸೇರಿಕೊಂಡಿದ್ದಾರೆ. ಅವರ ನಿಧನ ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದು ಸಚಿವ ಅರವಿಂದ ಲಿಂಬಾವಳಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಚಿತ್ರರಂಗ‌ ಕಂಬನಿ : ಕನ್ನಡ ಚಿತ್ರರಂಗದಲ್ಲಿ ನಟ,ನಿರ್ಮಾಪಕರಾಗಿ ಶಂಖನಾದ ಅರವಿಂದ ಅವರು ಗುರುತಿಸಿಕೊಂಡಿದ್ದರು.ಅವರ ನಿಧನದಿಂದ ಚಿತ್ರರಂಗ ಹಿರಿಯನಟನನ್ನು ಕಳೆದುಕೊಂಡಿದೆ. ಚಲನಚಿತ್ರ ಕಲಾವಿದರ ಸಂಘ ಸೇರಿದಂತೆ ಚಿತ್ರರಂಗದ ಅನೇಕರು ತೀವ್ರ ಕಂಬನಿ ಮಿಡಿದಿದ್ದಾರೆ. ಇತ್ತೀಚಿಗೆ ಅನೇಕ‌ ಹಿರಿಯ ಕಲಾವಿದರು, ನಿರ್ಮಾಪಕರು ,ನಿರ್ದೇಶಕರು ಮೃತಪಟ್ಟಿದ್ದಾರೆ.


 
Top