खेल

Blog single photo

ಶೂಟಿಂಗ್ ನಲ್ಲಿ ಅನೀಷ್ ಭನ್ವಾಲಾ ಅವರಿಗೆ ಚಿನ್ನದ ಪದಕ

18/07/2019


ನವದೆಹಲಿ, ಜು.18(ಹಿ.ಸ) -  ಜರ್ಮನಿಯಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌ ಸ್ಪರ್ಧೆಯಲ್ಲಿ ಭಾರತದ ಅನೀಷ್‌ ಭನ್ವಾಲಾ 25 ಮೀ. ರ್ಯಾಪಿಡ್‌ ಫೈರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. 
ಅರ್ಹತಾ ಸುತ್ತಿನಲ್ಲಿ 584 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿದ್ದ ಅನೀಷ್‌, ಫೈನಲ್‌ನಲ್ಲೂ  ಮುನ್ನಡೆ ಕಾಯ್ದುಕೊಂಡರು. ಒಟ್ಟು 29 ಅಂಕಗಳಿಸಿ ಚಿನ್ನದ ಪದಕ ಗಳಿಸಿದರು. ಇದೇ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಆದರ್ಶ್‌ ಸಿಂಗ್‌ 4ನೇ ಸ್ಥಾನ ಪಡೆದರೆ (17), ಆಗ್ನೇಯ ಕೌಶಿಕ್‌ 6ನೇ ಸ್ಥಾನಿಯಾದರು (9 ). ರಶ್ಯದ ಇಗೋರ್‌ ಇಸ್ಮಕೋವ್‌ ಬೆಳ್ಳಿ (23) ಮತ್ತು ಜರ್ಮನಿಯ ಫ್ಲೋರಿಯನ್‌ ಪೀಟರ್‌ ಕಂಚಿನ ಪದಕ (19) ಗೆದ್ದರು. ಇದರೊಂದಿಗೆ ಈ ಕೂಟದಲ್ಲಿ ಭಾರತ ಒಟ್ಟು 8 ಚಿನ್ನ, 7 ಬೆಳ್ಳಿ ಮತ್ತು 3 ಕಂಚಿನ ಪದಕ ಗೆದ್ದಂತಾಗಿದೆ. 


 
Top