विदेश

Blog single photo

ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಪೋಟ : 82 ಜನ ದಾರುಣ ಸಾವು

25/04/2021

ಬಾಗ್ದಾದ್, ಏ.25 : ಕೋವಿಡ್ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಪೋಟಗೊಂಡ ಪರಿಣಾಮ ಕನಿಷ್ಠ 82 ಜನ ಮೃತಪಟ್ಟಿರುವ ದುರ್ಘಟನೆ ಇರಾಕ್ ದೇಶದ ರಾಜಧಾನಿ ಬಾಗ್ದಾದ್​ನಲ್ಲಿ ನಡೆದಿದೆ.

ಶನಿವಾರ ರಾತ್ರಿ ಈ ಘಟನೆ ನಡೆದಿದ್ದು,  ಸುಮಾರು 110 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಇಲ್ಲಿನ ಐಬಿಎನ್ ಕತಿಬ್ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಪೂರೈಸಲು ತಂದಿದ್ದ ಆಕ್ಸಿಜ್​ ಟ್ಯಾಂಕ್​ನಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಇಡೀ ಆಸ್ಪತ್ರೆಯನ್ನು ವ್ಯಾಪಿಸಿದ್ದರಿಂದ 70 ಕೋವಿಡ್ ರೋಗಿಗಳು ಹಾಗೂ 12 ಜನ ಅವರ ಸಂಬಂಧಿಕರು, ವೈದ್ಯರು, ನರ್ಸ್​​ಗಳು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಸಾವು ನೋವಿನ ಪ್ರಮಾಣ ಇನ್ನೂ ಹೆಚ್ಚಾಗಲಿದೆ.ಅಲ್ಲದೆ, ಈ ರೀತಿ ಘಟನೆಗಳು ಮರುಕಳಿಸದಂತೆ ತುರ್ತಾಗಿ ಎಲ್ಲ ಆಸ್ಪತ್ರೆಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಇರಾಕ್ ಆಂತರಿಕ ಸಚಿವಾ
ಲಯದ ಪ್ರಕಟಣೆ ತಿಳಿಸಿದೆ.

ಇನ್ನು, ಘಟನೆ ಸಂಬಂಧಿಸಿದಂತೆ ಅಲ್ಲಿನ ಪ್ರಧಾನಿ ಮುಸ್ತಫಾ ಅಲ್-ಕಧಿಮಿ ತನಿಖೆಗೆ ಆದೇಶಿಸಿದ್ದಾರೆ.


 
Top