खेल

Blog single photo

ಪಂಜಾಬ್ ವಿರುದ್ದ‌ ಡೆಲ್ಲಿಗೆ 7 ವಿಕೆಟ್ ಭರ್ಜರಿ‌ ಜಯ : ಮಯಾಂಕ್ ಆಟ ವ್ಯರ್ಥ

03/05/2021

ಅಹಮದಾಬಾದ್, ಮೇ  2 : ಶಿಖರ್ ಧವನ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ , ಪಂಜಾಬ್ ಕಿಂಗ್ಸ್ ವಿರುದ್ಧ ಏಳು ವಿಕೆಟ್ ಗಳಿಂದ ಗೆಲುವು ಸಾಧಿಸಿತು.

ಡೆಲ್ಲಿ ಪರ ಪೃಥ್ವಿ ಶಾ ಮತ್ತು ಶಿಖರ್ ಧವನ್ ಮೊದಲ ವಿಕೆಟ್ ಗೆ 63 ರನ್ ಸೇರಿಸಿ ಉತ್ತಮ‌‌ ಆರಂಭ ಒದಗಿಸಿದರು.
ಶಾ 22 ಎಸೆತಗಳಲ್ಲಿ   39 ರನ್ ಗಳಿಸಿ ಔಟಾದರು. ಸ್ಟೀವ್ ಸ್ಮಿತ್ 24 ಹಾಗೂ ಪಂತ್ 12 ರನ್ ಗಳಿಸಿ ನಿರ್ಗಮಿಸಿದರು‌.
ಧವನ್ 47ಎಸೆತಗಳಲ್ಲಿ‌ 6 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ ಅಜೇಯ 69  ರನ್ ಗಳಿಸಿದರೆ, ಹೆಟ್ಮಿಯರ್ ನಾಲ್ಕು ಎಸೆತಗಳಲ್ಲಿ 14 ರನ್ ಬಾರಿಸಿ‌ ಔಟಾಗದೆ‌ ಉಳಿದರು.

 ಅಂತಿಮವಾಗಿ ಡೆಲ್ಲಿ  17.4 ಓವರ್‌ಗಳಲ್ಲಿ  ಮೂರು ವಿಕೆಟ್ ನಷ್ಟಕ್ಕೆ ‌ 167 ರನ್ ಗಳಿಸಿ ವಿಜಯದ ನಗೆ ಬೀರಿತು.
ಇದಕ್ಕೂ ಮುನ್ನ ಮೊದಲು‌‌‌ ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್  20 ಓವರ್ ಗಳಲ್ಲಿ  ಆರು ವಿಕೆಟ್ ಕಳೆದುಕೊಂಡು‌ 166 ರನ್ ಸವಾಲಿನ ಮೊತ್ತ ಗಳಿಸಿತು.

ಅನಾರೋಗ್ಯದ ನಿಮಿತ್ತ ನಾಯಕ ಈ‌ ಪಂದ್ಯದಲ್ಲಿ ಆಡಲಿಲ್ಲ. ಈ ಹಿನ್ನಲೆಯಲ್ಲಿ ಉಸ್ತುವಾರಿ ನಾಯಕ ನಾಗಿ ಮಯಾಂಕ್ ಆಗರ್ ವಾಲ್ 99 ರನ್ ಗಳಿಸಿ ಕೇವಲ ಒಂದು‌ ರನ್ ನಿಂದ ಶತಕ ತಪ್ಪಿಸಿಕೊಂಡರು.

ಕೊನೆಯವರೆಗೂ ಹೋರಾಟ ನಡೆಸಿದ ಮಯಾಂಕ್ ಅಮೋಘ ಇನ್ನಿಂಗ್ಸ್‌ನಲ್ಲಿ  ಎಂಟು ಬೌಂಡರಿ‌ ಹಾಗೂ ನಾಲ್ಕು ಸಿಕ್ಸರ್ ಬಾರಿಸಿದರು 99 ರನ್ ಗಳಿಸಿ ಅಜೇಯರಾಗುಳಿದರು.‌ಮಾಲನ್ 26 ರನ್ ಗಳಿಸಿದರು.ಆದರೆ ಮಯಾಂಕ್  ಆಟ ವ್ಯರ್ಥವಾಯಿತು.

ಪಂತ್ ಪಡೆ ಎಂಟು ಪಂದ್ಯಗಳಲ್ಲಿ  ಆರು‌ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಒಟ್ಟು 12 ಅಂಕಗಳನ್ನು ತೆಕ್ಕೆಗೆ ಹಾಕಿಕೊಂಡಿದೆ.
ಪಂಜಾಬ್ ಎಂಟು ಪಂದ್ಯಗಳಲ್ಲಿ ಐದು ಪಂದ್ಯಗಳಲ್ಲಿ ಸೋತಿದ್ದು ಆರು‌‌ ಅಂಕ ಗಳಿಸಿದೆ.


 
Top