खेल

Blog single photo

ವಿಶೇಷ ವಿಮಾನದಲ್ಲಿ ಆಸೀಸ್ ಆಟಗಾರರ ರವಾನೆಗೆ ಬಿಸಿಸಿಐ ಸಿದ್ಧತೆ

05/05/2021

ಸಿಡ್ನಿ, ಮೇ 5 : ಕೋವಿಡ್ ಹೆಚ್ಚಾದ ಹಿನ್ನಲೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಐಪಿಎಲ್ ರದ್ದುಪಡಿಸಲಾಗಿದೆ. ಈ‌ ಹಿನ್ನೆಲೆಯಲ್ಲಿ ದೇಶದಲ್ಲಿ ಸಿಲುಕಿರುವ ಆಸ್ಟ್ರೇಲಿಯಾ ಆಟಗಾರರನ್ನು  ವಿಶೇಷ ವಿಮಾನದ ಮೂಲಕ ಶ್ರೀಲಂಕಾ ಅಥವಾ ಮಾಲ್ಡೀವ್ಸ್ ಮೂಲಕ ರವಾನಿಸಲು ಬಿಸಿಸಿಐ ಪ್ರಕ್ರಿಯೆ ಆರಂಭಿಸಿದೆ.

ವಿದೇಶಿ ಆಟಗಾರರನ್ನು ಸುರಕ್ಷಿತವಾಗಿ ಕಳುಹಿಸಿಕೊಡುವುದಾಗು ಈ ಮೊದಲು ಬಿಸಿಸಿಐ ಭರವಸೆ ನೀಡಿತ್ತು.
ಈ ಸಂಬಂಧ ಕ್ರಿಕೆಟ್‌ ಆಸ್ಟ್ರೇಲಿಯಾ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿದೆ.

ಮೇ 15 ರವರೆಗೆ ಭಾರತದಿಂದ ಪ್ರಯಾಣಕ್ಕೆ ಆಸ್ಟ್ರೇಲಿಯಾ ನಿರ್ಬಂಧ ವಿಧಿಸಿದೆ. ಸರಕು ಸಾಗಾಣಿಕಾ ವಿಮಾನದ ಮೂಲಕ ಶ್ರೀಲಂಕಾ ಇಲ್ಲವೆ ಮಾಲ್ಡೀವ್ಸ್ ಗೆ ರವಾನಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ  ತಿಳಿಸಿದೆ.

ಏತನ್ಮಧ್ಯೆ ಕೋವಿಡ್ ಸೋಂಕು ದೃಢಗೊಂಡಿರುವ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ತರಬೇತುದಾರ ಮೈಕ್ ಹಸ್ಸಿ, ಭಾರತದಲ್ಲೇ 10 ದಿನಗಳ ಕ್ವಾರಂಟೈನ್ ವಾಸವನ್ನು ಪೂರ್ಣಗೊಳಿಸಲಿದ್ದಾರೆ.


 
Top