ट्रेंडिंग

Blog single photo

ರಫೆಲ್ ಯುದ್ಧ ವಿಮಾನಕ್ಕೆ ಪೂಜೆ, ಸಚಿವ ರಾಜನಾಥ್ ಸಿಂಗ್ ನಾಟಕ - ಮಲ್ಲಿಕಾರ್ಜುನ ಖರ್ಗೆ

09/10/2019


ಬೆಂಗಳೂರು, ಅ.09 (ಹಿ.ಸ) -  ಫ್ರಾನ್ಸ್ ಸರ್ಕಾರ ಭಾರತಕ್ಕೆ ಹಸ್ತಾಂತರಿಸಿದ ರಫೆಲ್ ಯುದ್ಧ ವಿಮಾನಕ್ಕೆ ವಿಜಯದಶಮಿಯಂದು ಶಸ್ತ್ರಪೂಜೆ ಸಲ್ಲಿಸಿ ನಾಟಕವಾಡುವ ಅಗತ್ಯವಿರಲಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗೆ ವಿರುದ್ಧ ಹರಿಹಾಯ್ದಿದ್ದಾರೆ. 
ನಾವು ಈ ಹಿಂದೆ ಬೋಪೋರ್ಸ್ ಫಿರಂಗಿಯಂತಹ ಶಸ್ತ್ರಾಸ್ತ್ರಗಳನ್ನು ಖರೀದಿಸಿದಾಗ ಅವುಗಳನ್ನು ತರಲು ಮತ್ತು ಪ್ರಚಾರ ಗಿಟ್ಟಿಸಿಕೊಳ್ಳಲು ಯಾರೂ ಹೋಗಿರಲಿಲ್ಲ. ಆದರೆ, ರಾಜನಾಥ್ ಸಿಂಗ್ ಅವರು ವಿಮಾನಕ್ಕೆ ಆಯುಧ ಪೂಜೆ ಸಲ್ಲಿಸುವ ಮೂಲಕ ನಾಟಕ ಮಾಡುವ ಅಗತ್ಯ ಇರಲಿಲ್ಲ ಎಂದಿದ್ದಾರೆ. ವಾಯುಪಡೆ ಅಧಿಕಾರಿಗಳು, ಆ ವಿಮಾನಗಳು ಸಮರ್ಥವಾಗಿಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಿದ್ದಾರೆ. ಆದರೆ, ಸಿಂಗ್ ಅಲ್ಲಿಗೆ ಹೋಗಿ, ಆ ವಿಮಾನದಲ್ಲಿ ಕುಳಿತು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದು ಖರ್ಗೆ ಹೇಳಿರುವುದಾಗಿ ವರದಿಯಾಗಿದೆ. 
ನಿನ್ನೆಯಷ್ಟೇ ಅಧಿಕೃತವಾಗಿ ಮೊದಲ ರಫೆಲ್ ಯುದ್ಧ ವಿಮಾನ ಸ್ವೀಕರಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಅದಕ್ಕೆ ಓಂ ಎಂದು ಬರೆದು, ಪೂಜೆ  ಸಲ್ಲಿಸಿದ್ದರು. 


 
Top