मनोरंजन

Blog single photo

ಡಚ್ ರೂಪದರ್ಶಿ ಮೇಲೆ ಅತ್ಯಾಚಾರ ಎಸಗಿ ಕೆಳಕ್ಕೆ ತಳ್ಳಿ ಹತ್ಯೆ

28/11/2019


ಕೌಲಲಾಂಪುರ್, ನ.28 (ಹಿ.ಸ) - ಉದ್ದೀಪನ ಮಾದಕ ದ್ರವ್ಯ ಸೇವಿಸಿದ ಬಳಿಕ ಡಚ್ ಮೂಲದ ರೂಪದರ್ಶಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯನ್ನು ನಗ್ನವಾಗಿ 20ನೇ ಮಹಡಿಯಿಂದ ಕೆಳಕ್ಕೆ ದೂಡಿ ಹತ್ಯೆಗೈದಿರುವುದಾಗಿ ಮಲೇಷ್ಯಾ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.  ಇವಾನಾ ಸ್ಮಿತ್ ಎಂಬ ರೂಪದರ್ಶಿಯನ್ನು ನಗ್ನಗೊಳಿಸಿ 20ನೇ ಮಹಡಿಯಿಂದ ತಳ್ಳಿದ ಪರಿಣಾಮ ಆಕೆ ಆರನೇ ಮಹಡಿಯ ಬಾಲ್ಕನಿ ಮೇಲೆ ಬಿದ್ದು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. 2017ರ ಡಿಸೆಂಬರ್ ನಲ್ಲಿ ಈ ಘಟನೆ ನಡೆದಿದ್ದು, ಈ ಕೊಲೆ ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ಕಾನೂನು ಸಮರ ನಡೆಯುತ್ತಿದೆ.
18 ವರ್ಷದ ಇವಾನಾಳ ಮೇಲೆ ಮಿತಿಮೀರಿ ಡ್ರಗ್ಸ್ ಹಾಗು ಮದ್ಯಪಾನ ಸೇವಿಸಿ ಸಾಮೂಹಿಕ ಲೈಂಗಿಕ ಕ್ರಿಯೆ ನಡೆಸಿರುವುದಾಗಿ ವರದಿ ತಿಳಿಸಿದೆ. ಇದೊಂದು ಮೂರ್ಖರನ್ನಾಗಿಸುವ ನಾಟಕ ಎಂಬ ಆರೋಪವನ್ನು ಪೊಲೀಸ್ ಅಧಿಕಾರಿಗಳು ತಳ್ಳಿಹಾಕಿದ್ದರು. 
ಆದರೆ, ಸ್ಮಿತ್ ಕುಟುಂಬದವರು ಪೊಲೀಸರ ವಿರುದ್ಧ ಹೈಕೋರ್ಟ್ ನಲ್ಲಿ ಕಾನೂನು ಸಮರ ಆರಂಭಿಸಿದ್ದರು. ಕಳೆದ ವಾರ ಪ್ರಕರಣದ ಬಗ್ಗೆ ಆದೇಶ ನೀಡಿದ್ದು, ಈ ಘಟನೆಯಲ್ಲಿ ಪರಿಚತರಾಗಿರಲಿ ಅಥವಾ ಅಪರಿಚಿತರೇ ಶಾಮೀಲಾಗಿರಲಿ, ಮತ್ತೆ ಹೊಸದಾಗಿ ತನಿಖೆ ನಡೆಸಬೇಕೆಂದು ಕೋರ್ಟ್ ನಿರ್ದೇಶನ ನೀಡಿದೆ. 
ಸ್ಮಿತ್ ಪ್ರಕರಣದ ಬಗ್ಗೆ ಮರು ತನಿಖೆಗೆ ಟಾಸ್ಕ್ ಪೋರ್ಸ್ ರಚಿಸಲಾಗುವುದು ಎಂದು ಪೊಲೀಸ್ ಕ್ರಿಮಿನಲ್ ಇನ್ವೆಸ್ಟಿಗೇಶನ್ ಇಲಾಖೆ ಮುಖ್ಯಸ್ಥ ಹಜೀರ್ ಮೊಹಮ್ಮದ್ ತಿಳಿಸಿದ್ದಾರೆ.


 
Top