खेल

Blog single photo

2ನೇ ಭಾರಿಗೆ 2023ರ ವಿಶ್ವಕಪ್ ಹಾಕಿ ಪಂದ್ಯಾವಳಿಗೆ ಒಡಿಶಾ ಅತಿಥ್ಯ

28/11/2019ಭುವನೇಶ್ವರ, ನ. 28 (ಹಿ.ಸ) - ಪ್ರತಿಷ್ಠಿತ ವಿಶ್ವಕಪ್‌ ಹಾಕಿ ಪಂದ್ಯಾವಳಿ ಆತಿಥ್ಯ ಸತತ 2ನೇ ಸಲ ಭಾರತದ ಪಾಲಾಗಿದೆ.  2023ರ ಪುರುಷರ ವಿಭಾಗದ ವಿಶ್ವಕಪ್‌ ಪಂದ್ಯಗಳು ಒಡಿಶಾದ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ನಡೆಯಲಿವೆ ಎಂದು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌  ಘೋಷಿಸಿದ್ದಾರೆ. ಈ ಪಂದ್ಯಾವಳಿ 2023ರ ಜ. 13ರಿಂದ 29ರ ತನಕ ನಡೆಯಲಿದೆ.
ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ಹಾಗು ಭಾರತೀಯ ಒಲಿಂಪಿಕ್‌ ಅಸೋಸಿಯೇಷನ್‌ ಅಧ್ಯಕ್ಷ ನರೀಂದರ್‌ ಬಾತ್ರಾ, ಹಾಕಿ ಇಂಡಿಯಾದ ಅಧ್ಯಕ್ಷ ಮೊಹಮ್ಮದ್‌ ಮುಷ್ತಾಕ್‌ ಅಹ್ಮದ್‌, ಒಡಿಶಾದ ಕ್ರೀಡಾ ಸಚಿವ ತುಷಾರ್‌ಕಾಂತಿ ಬೆಹೆರಾ ಉಪಸ್ಥಿತರಿದ್ದರು.
ದೇಶದ ಪ್ರಮುಖ ಹಾಕಿ ಕೇಂದ್ರವಾಗಿ ಬೆಳೆಯುತ್ತಿರುವ ಭುವನೇಶ್ವರದಲ್ಲಿ 2018ರ ವಿಶ್ವಕಪ್‌ ಹಾಕಿ ಪಂದ್ಯಾವಳಿ ಯಶಸ್ವಿಯಾಗಿ ನಡೆದಿತ್ತು. ಅಂದು ಬೆಲ್ಜಿಯಂ ಚಾಂಪಿಯನ್‌ ಆಗಿತ್ತು. 2017ರ ಏಷ್ಯನ್ ಅಥ್ಲೇಟಿಕ್ಸ್ ಚಾಂಪಿಯನ್‌ಶಿಪ್‌, ಅದೇ ವರ್ಷದ ಎಫ್ಐಎಚ್‌ ಹಾಕಿ ವರ್ಲ್ಡ್ ಲೀಗ್‌ ಫೈನಲ್‌, 2019ರ ಎಫ್ಐಎಚ್‌ ಪುರುಷರ ಸರಣಿ ಫೈನಲ್ಸ್‌, ಇತ್ತೀಚಿನ ಎಫ್ಐಎಚ್‌ ಹಾಕಿ ಒಲಿಂಪಿಕ್‌ ಅರ್ಹತಾ ಪಂದ್ಯಾವಳಿಗಳೆಲ್ಲಾ ಭುವನೇಶ್ವರದಲ್ಲಿ ಯಶಸ್ಸು ಕಂಡಿದ್ದವು.
2020ರ ವನಿತೆಯರ ಫಿಫಾ ಅಂಡರ್‌-17 ಕೂಟದ ತಾಣಗಳಲ್ಲಿ ಭುವನೇಶ್ವರ ಕೂಡ ಒಂದಾಗಿದೆ.


 
Top