अंतरराष्ट्रीय

Blog single photo

ಆಲ್ ಖೈದಾ ಭಯೋತ್ಪಾದಕ ಅಸೀಂ ಉಮರ್ ಹತ್ಯೆ

09/10/2019


ನವದೆಹಲಿ, ಅ.09 (ಹಿ.ಸ) -  ಕುಖ್ಯಾತ ಭಯೋತ್ಪಾದಕ ಸಂಘಟನೆಯಾದ ಆಲ್ ಖೈದಾ ನಾಯಕ ಅಸೀಂ ಉಮರ್ ನನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ ಎಂದು ವರದಿಯಾಗಿದೆ.  ಅಫ್ಘಾನಿಸ್ಥಾನದ ದಕ್ಷಿಣ ಭಾಗದಲ್ಲಿರುವ ಹೆಲ್ಮಂಡ್​ ಪ್ರಾಂತ್ಯದ ಮುಸಾ ಖಲಾ ಜಿಲ್ಲೆಯಲ್ಲಿ ಭಾರತೀಯ ಉಪಖಂಡದ ಅಲ್​ ಕೈದಾ ನಾಯಕ ಅಸೀಂ ಉಮರ್ ಹತನಾಗಿದ್ದಾನೆ ಎಂದು ತಿಳಿದು ಬಂದಿದೆ. ಅಮೆರಿಕ ಸೇನಾಪಡೆಗಳು ಅಫ್ಘಾನಿಸ್ತಾನದಲ್ಲಿ ಅಲ್​ ಖೈದಾ ಉಗ್ರರ ಮೇಲಿನ ದಾಳಿ ಮುಂದುವರಿಸಿದ್ದು, ಈ ದಾಳಿಯಲ್ಲಿ ಈತ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. 


 
Top