ट्रेंडिंग

Blog single photo

ಈರುಳ್ಳಿ ಬಳಿಕ ಗಗನಕ್ಕೇರಿದ ಟೊಮೊಟೋ ಬೆಲೆ

09/10/2019


ನವದೆಹಲಿ, ಅ.09 (ಹಿ.ಸ) - ಈರುಳ್ಳಿ ಬಳಿಕ ಇದೀಗ ಟೊಮೊಟೋ ಬೆಲೆ ಗಗನಕ್ಕೇರಿದೆ. ಕೆಜಿ ಟೊಮೊಟೋ ಬೆಲೆ 80 ರುಪಾಯಿ ಆಗಿದೆ. ಕರ್ನಾಟಕ ಸೇರಿದಂತೆ ಟಮೊಟೋ ಬೆಲೆಯುವ ರಾಜ್ಯಗಳಲ್ಲಿ ನೆರ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಟಮೊಟೋ ಉತ್ಪಾದನೆಯಲ್ಲಿ ಇಳಿತ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಟಮೊಟೋ ಬೆಲೆ ಕೆಜಿಗೆ 80 ರುಪಾಯಿ ಆಗಿದೆ.  ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈರುಳ್ಳಿ ಬೆಲೆ ಇಳಿಮುಖವಾಗಿದೆ.  ಕಳೆದ ವಾರ 80 ರುಪಾಯಿ ಇದ್ದ ಬೆಲೆ ಇದೀಗ 60 ರುಪಾಯಿಗೆ ಇಳಿಕೆಯಾಗಿದೆ. 


 
Top