अंतरराष्ट्रीय

Blog single photo

ಇಬ್ಬರ ಹತ್ಯೆ ಮಾಡಿದ್ದ ನಕಲಿ ಆತ್ಮಾಹುತಿ ಬಾಂಬರ್ ಎನ್ ಕೌಂಟರ್ ಗೆ ಬಲಿ

30/11/2019



ಲಂಡನ್, ನ. 30 (ಹಿ.ಸ) -  ಆತ್ಮಾಹುತಿ ಬಾಂಬರ್ ನಂತೆ ನಕಲಿ ವೇಷ ಧರಿಸಿದ್ದ ಶಸ್ತ್ರಧಾರಿ ವ್ಯಕ್ತಿಯೊಬ್ಬ ಲಂಡನ್ ಸೇತುವೆ ಮೇಲೆ ಇಬ್ಬರನ್ನು ಹತ್ಯೆಗೈದಿದ್ದು,  ಕ್ಷಿಪ್ರ ಕಾರ್ಯಾಚರಣೆಯಲ್ಲಿ ಲಂಡನ್ ಪೊಲೀಸರ ಎನ್ ಕೌಂಟರ್ ಗೆ ಶಸ್ತ್ರಧಾರಿ ವ್ಯಕ್ತಿ ಬಲಿಯಾಗಿರುವುದಾಗಿ ವರದಿಯಾಗಿದೆ. ಈ  ದಾಳಿಯಲ್ಲಿ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಮೂವರು ಲಂಡನ್ ಸೇತುವೆ ಮೇಲೆ ದಾಳಿ ನಡೆಸಿದ್ದ ಘಟನೆಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದರು ಎಂದು ವರದಿ ವಿವರಿಸಿದೆ. ಜನನಿಬಿಡ ಪ್ರದೇಶದಲ್ಲಿಯೇ ಈ ಘಟನೆ ನಡೆದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇಬ್ಬರನ್ನು ಚೂರಿಯಿಂದ ಇರಿದ ವ್ಯಕ್ತಿಯನ್ನು ಸಮೀಪದಲ್ಲಿಯೇ ನಿಂತಿದ್ದ ಹಲವಾರು ಮಂದಿ ಆತನನ್ನು ಹಿಡಿದು, ಚೂರಿಯನ್ನು ಕಸಿದುಕೊಂಡಿದ್ದರು. ನೆಲದಲ್ಲಿ ಬಿದ್ದಿದ್ದ ದಾಳಿಕೋರ ಮೇಲಕ್ಕೆ ಏಳುತ್ತಿದ್ದಂತೆಯೇ ಶಸ್ತ್ರಸಜ್ಜಿತ ಲಂಡನ್ ಪೊಲೀಸ್ ಅಧಿಕಾರಿ ಗುಂಡಿನ ದಾಳಿ ನಡೆಸಿ ಆತನನ್ನು ಹೊಡೆದುರುಳಿಸಿರುವುದಾಗಿ ವರದಿ ತಿಳಿಸಿದೆ.  ಪೊಲೀಸರು ಬರುವ ಮುನ್ನವೇ ಸಾರ್ವಜನಿಕರು ಧೈರ್ಯ ತೋರಿ ಆತನನ್ನು ಹಿಡಿದಿರುವುದಕ್ಕೆ ಲಂಡನ್ ಮೇಯರ್ ಸಾದಿಕ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


 
Top