भारत

Blog single photo

ಬುಧವಾರ ಮಮತಾ ಬ್ಯಾನರ್ಜಿ ಪ್ರಮಾಣ ವಚನ

03/05/2021

ಕೊಲ್ಕತ್ತ, ಮೇ 3 : ವಿಧಾನಸಭಾ ಚುನಾವಣೆಯಲ್ಲಿ  ಭರ್ಜರಿ ಜಯಭೇರಿ ಬಾರಿಸಿರುವ ಮಮತಾ ಬ್ಯಾನರ್ಜಿ ಮೇ  5 ರಂದು ಮುಖ್ಯಮಂತ್ರಿ ಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಪಕ್ಷದ ಮುಖಂಡ ಪಾರ್ಥ ಈ ಕುರಿತು ಮಾಹಿತಿ ನೀಡಿದ್ದಾರೆ.

ಫಲಿತಾಂಶ ಹೊರಬೀಳುತ್ತಿದ್ದಂತೆ ರಾಜ್ಯಪಾಲ ಜಗದೀಪ್ ಧನ್ ಕಡ್ ಶುಭಾಶಯ ಕೋರಿ ಟ್ವೀಟ್ ಮಾಡಿದ್ದರು. ಎಂಟು ಹಂತಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ 292 ಸ್ಥಾನಗಳ ಪೈಕಿ 212 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿತ್ತು.
ಈ ಮೂಲಕ ಮಮತಾ ಮೂರನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳುವಲ್ಲಿ  ಮಮತಾ ಸಫಲರಾಗಿದ್ದಾರೆ. 77 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ.


 
Top