मनोरंजन

Blog single photo

ಪೋಲೆಂಡ್ ಭಾರತೀಯ ರಾಯಭಾರಿ ಕಚೇರಿಯಲ್ಲಿ ನಟ ಕಿಚ್ಚಸುದೀಪ್

28/09/2019


ಪೋಲೆಂಡ್ , ಸೆ.28 (ಹಿ.ಸ) -  ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್‌ ಅಭಿನಯದ ಕೋಟಿಗೊಬ್ಬ-3 ಚಿತ್ರೀಕರಣಕ್ಕೆ ಚಾಲನೆ ದೊರೆತಿದೆ. ಪೈಲ್ವಾನ್‌ ಚಿತ್ರದ ಬಿಡುಗಡೆ, ಪ್ರಮೋಶನ್‌ನಲ್ಲಿ ಬಿಜಿಯಾಗಿದ್ದ ನಟ ಸುದೀಪ್‌ ಇದೀಗ ಪೋಲೆಂಡ್ ನ‌ಲ್ಲಿ ಕೋಟಿಗೊಬ್ಬ-3 ಚಿತ್ರೀಕರಣದಲ್ಲಿ ತೊಡಗಿದ್ದಾರೆ.
ಈ ನಡುವೆಯೇ ಸುದೀಪ್‌ ಹಾಗು ಚಿತ್ರತಂಡ ಪೋಲೆಂಡ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಭೇಟಿ ನೀಡಿದ್ದಾರೆ. ಇವರಿಗೆ ನಟ ರವಿಶಂಕರ್‌ ಕೂಡ ಜೊತೆಯಾಗಿದ್ದಾರೆ. ಭಾರತೀಯ ರಾಯಭಾರಿ ಕಚೇರಿಯಲ್ಲಿ ಸುದೀಪ್‌ ನಿಂತಿರುವ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 


 
Top