खेल

Blog single photo

ಪೃಥ್ವಿ ಶಾ ಅಬ್ಬರ ಕೆಕೆಆರ್ ತತ್ತರ : ಪಂತ್ ಪಡೆಗೆ 7 ವಿಕೆಟ್ ಜಯ

30/04/2021

ಅಹಮದಾಬಾದ್, ಏ.29 :  ಪೃಥ್ವಿ  ಶಾ ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ , ಕೆಕೆಆರ್ ವಿರುದ್ಧ 7 ವಿಕೆಟ್ ಗಳಿಂದ  ಭರ್ಜರಿ ಜಯ ಸಾಧಿಸಿತು.

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ನ 25 ನೇ ಪಂದ್ಯದಲ್ಲಿ  ಇನ್ನಿಂಗ್ಸ್ ಆರಂಭಿಸಿದ ಪೃಥ್ವಿ  ಶಾ ಮತ್ತು ಶಿಖರ್ ಧವನ್ ಮೊದಲನೇ ವಿಕೆಟ್‌ ಗೆ  132 ರನ್ ಸೇರಿಸಿದರು. ಈ ಇಬ್ಬರೂ ಆಟಗಾರರು ಕೆಕೆಆರ್ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ನೀಡಿದರು.

ಅದರಲ್ಲೂ ಸ್ಪೋಟಕ ಬ್ಯಾಟ್ಸ್‌ಮನ್‌ ಶಾ ಓವರ್ ವೊಂದರ ಎಲ್ಲ ಎಸೆತಗಳನ್ನು ಚೆಂಡನ್ನು ಬೌಂಡರಿಗೆ ಅಟ್ಡುವ‌ ಮೂಲಕ ವಿಶಿಷ್ಟ ದಾಖಲೆ ಬರೆದರು.

ಶಿವಂ ಮಾವಿ ಇನ್ನಿಂಗ್ಸ್ ಆರಂಭದ ಮೊದಲ ಓವರ್ ನ ಲ್ಲೇ ಆರು ಬೌಂಡರಿ ಸಿಡಿಸಿದ್ದಾರೆ. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹ ಆಟಗಾರ ಅಜಿಂಕ್ಯ ರಹಾನೆ ದಾಖಲೆಯನ್ನು ಪೃಥ್ವಿ ಶಾ ಸರಿಗಟ್ಟಿದ್ದು, ಐಪಿಎಲ್‌ನಲ್ಲಿ ಎಲ್ಲ ಆರು ಎಸೆತಗಳಲ್ಲಿ ಬೌಂಡರಿ ಸಿಡಿಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಷಾ ಭಾಜನರಾಗಿದ್ದಾರೆ.

ಒಂಬತ್ತು ವರ್ಷಗಳ ಹಿಂದೆ 2012ರಲ್ಲಿ ಅಜಿಂಕ್ಯ ರಹಾನೆ, ಓವರ್‌ವೊಂದರ ಎಲ್ಲ ಆರು ಎಸೆತಗಳಲ್ಲಿ ಬೌಂಡರಿ ಗಳಿಸಿದ್ದರು. 

ಇದರ ಜತೆಗೆ ಕೇವಕ 18 ಎಸೆತಗಳಲ್ಲಿ  ಅರ್ಧ ಶತಕ  ಷಾ ಸಿಡಿಸಿದರು. ಇದು ಈ ಆವೃತ್ತಿಯಲ್ಲಿ ಅತ್ಯಂತ ವೇಗದ ಆರ್ಧ ಶತಕವಾಗಿದೆ.

41 ಎಸೆತಗಳಲ್ಲಿ  11 ಬೌಂಡರಿ ಹಾಗೂ ಮೂರು ಸಿಕ್ಸರ್ ಬಾರಿಸಿ 82 ರನ್ ಗಳಿಸಿ ಔಟಾದರು. ಧವನ್ 46ರನ್ ಗಳಿಸಿ ತಂಡದ ಗೆಲುವಿಗೆ ಆಸರೆಯಾದರು. ಪಂತ್ 16 ರನ್ ಗಳಿಸಿದರೆ, ಸ್ಟೋನಿಸ್ 6 ರನ್ ಗಳಿಸಿ ನಾಟ್ ಔಟಾದರು.‌
ಪ್ಯಾಟ್ ಕಮಿನ್ಸ್ ಮೂರು ವಿಕೆಟ್ ಪಡೆದರು.

ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 154 ರನ್ ಗಳಿಸಲಷ್ಟೇ ಸಾಧ್ಯವಾಯಿತು.

 ಆಂಡ್ರಿ ರಸೆಲ್ 27 ಎಸೆತಗಳಲ್ಲಿ  ನಾಲ್ಕು ಸಿಕ್ಸರ್ ಹಾಗೂ ಎರಡು ಬೌಂಡರಿ ಬಾರಿಸಿ ಅಜೇಯ 45 ರನ್ ಗಳಿಸಿದರು. ಶುಭಮನ್ ಗಿಲ್ 43 ರನ್ ಕಾಣಿಕೆ ನೀಡಿದರು.

ತ್ರಿಪಾಠಿ 19, ಕಾರ್ತಿಕ್ 14 ಮತ್ತು ನಿತೀಶ್  15 ರನ್ ಗಳಿಸಿದರು. ಅಕ್ಷರ್ ಹಾಗೂ ಲಲಿತ್ ತಲಾ ಎರಡು ವಿಕೆಟ್‌ ಗಳಿಸಿದರು.


 
Top