खेल

Blog single photo

ಐಸಿಸಿ ವಿಶ್ವಕಪ್ - ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್

14/07/2019


ಲಾರ್ಡ್ಸ್, ಜು.14 (ಹಿ.ಸ) -  ಐಸಿಸಿ ವಿಶ್ವಕಪ್ ಕ್ರಿಕೆಟ್ ಅಂತಿಮ ಹಂತದ ಹಣಾಹಣಿಯಲ್ಲಿ ಅತಿಥೇಯ ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಂಟಿಂಗ್ ಆಯ್ದುಕೊಂಡಿದೆ.
ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಟಾಸ್ ಗೆದ್ದಿದೆ. ವಿಶೇಷವೆಂದರೆ ಈ ಹಿಂದೆ ಸರಣಿಯ ನಾಲ್ಕು ಪಂದ್ಯಗಳು ಲಾರ್ಡ್ಸ್ ನಲ್ಲಿ ನಡೆದಾಗ ಮೊದಲು ಬ್ಯಾಟ್ ಮಾಡಿದ್ದ ತಂಡವೇ ಗೆಲುವು ದಾಖಲಿಸಿದೆ.  
ಈ ಹಿನ್ನೆಲೆಯಲ್ಲಿ ಟಾಸ್ ಎನ್ನುವುದು ನಿರ್ಣಾಯಕ ಆಗಿದೆ. ಕಳೆದ ವಿಶ್ವಕಪ್ ನಲ್ಲಿ ಲೀಗ್ ಹಂತದಲ್ಲೇ ಸೋಲು ಕಂಡು ಹೊರನಡೆದಿದ್ದ ಇಂಗ್ಲೆಂಡ್ ಈ ಬಾರಿ ತವರು ನೆಲದಲ್ಲಿ ಫೈನಲ್ ಗೇರಿದೆ. ಇನ್ನು ನ್ಯೂಜಿಲೆಂಡ್ ಸಹ ಕಳೆದ ಬಾರಿಯಂತೇ ಈ ಬಾರಿ ಸಹ ಫೈನಲ್ ಪ್ರವೇಶಿಸಿದ್ದು ವಿಶೇಷವಾಗಿ ಇಂದು ಯಾವುದೇ ತಂಡ ಜಯಿಸಿದರೂ ವಿಶ್ವಕಪ್ ಇತಿಹಾಸದಲ್ಲಿ 23 ವರ್ಷಗಳ ನಂತರ ಹೊಸ ತಂಡವೊಂದು ಚಾಂಪಿಯನ್ ಪಟ್ಟ ಅಲಂಕರಿಸುವುದು ಖಚಿತ.


 
Top